ಪುಷ್ಪಾ ಭುಯಾನ್ ( ೧೯೪೬ -೭ ಅಕ್ಟೋಬರ್ ೨೦೧೫) ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ. ಇವರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಸತ್ರಿಯಾದಲ್ಲಿ ಪರಿಣತಿ ಹೊಂದಿದ್ದರು. ಇವರು ಈಶಾನ್ಯ ಭಾರತದ ರಾಜ್ಯವಾದ ಅಸ್ಸಾಂನವರು. ಇವರು ಭಬಾನಂದ ಬಾರ್ಬಯಾನ್‌ನಿಂದ ಸತ್ರಿಯಾ ಕಲಿತಿದ್ದರು. ನಂತರ ಗುರು ಮಾಂಗುಡಿ ದೊರೈರಾಜ ಅಯ್ಯರ್ ಅವರ ಬಳಿ ಭರತನಾಟ್ಯ ಕಲಿತರು. ಇವರು ಇತರ ನೃತ್ಯಗಾರರಿಗೂ ಸಹ ನೃತ್ಯ ಕಲಿಸುತ್ತಿದ್ದರು . ಇವರ ಸಾಧನೆಗೆ ಈಶಾನ್ಯ ದೂರದರ್ಶನದ ಜೀವಮಾನದ ಸಾಧನೆಯ ಪ್ರಶಸ್ತಿ ಸ್ವೀಕರಿಸಿದರು ಹಾಗೂ ಪುಷ್ಪಾ ಭೂಯಾನ್ ಅವರ ಸಾಧನೆಗೆ ೨೦೦೨ ರಲ್ಲಿ ಭಾರತ ಸರ್ಕಾರವು ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. == ಉಲ್ಲೇಖಗಳು ==